ದೇಹದ ಹರಳು ಮ್ಯೂಸಿಯಂ - 
	ದೇಹದ ವಿವಿಧ ಭಾಗಗಳಲ್ಲಿ ಹರಳುಗಳು ಹುಟ್ಟಬಹುದು. ಇವುಗಳನ್ನೆಲ್ಲ ದೇಹದ ಹರಳು ಎಂದು ಕರೆಯುತ್ತೇವೆ. ಇಂಥ ಹರಳುಗಳನ್ನು ಒಂದು ಕಡೆ ಸಂಗ್ರಹಿಸಿ ಪ್ರದರ್ಶನ ಮಾಡಿರುವ  ಸ್ಥಳವೆ ದೇಹದ ಹರಳು ಮ್ಯೂಸಿಯಮ್. ಇದನ್ನು ಆಂಗ್ಲಭಾಷೆಯಲ್ಲಿ Stones ಎನ್ನುತ್ತಾರೆ. ದೇಹದಲ್ಲಿ ಹುಟ್ಟಿಕೊಂಡ ಹರಳುಗಳನ್ನು ಒಂದು ಚಿಕ್ಕ ಸ್ಥಾನದಲ್ಲಿ ಕೂಡಿಡುವುದು ಸಾಮಾನ್ಯ. ಅದನ್ನು ಯಾರೂ ದೇಹದ ಹರಳು ಮ್ಯೂಸಿಯಮ್ ಎಂದು ಕರೆಯುವುದಿಲ್ಲ.

	ನಾಡಿನ ಕೆಲವು ಭಾಗಗಳಲ್ಲಿ ದೇಹದ ಕಲ್ಲುಗಳು ಆಗುವುದು ಜಾಸ್ತಿ. ಇಂಥ ಪ್ರದೇಶವನ್ನು Sಣoಟಿe ಃeಟಣ ಎಂದು ಗುರುತಿಸುತ್ತಾರೆ. ವಿಜಾಪುರವೂ ಅಂಥ ಒಂದು ಪ್ರದೇಶವು ಕಾರಣ ಆ ಪ್ರದೇಶದಲ್ಲಿ ಒಂದು ಹರಳು ಮ್ಯೂಸಿಯಮ್ ನಿರ್ಮಿಸುವುದೆಂದು ನಿರ್ಣಯಿಸಿದರು.

	ಆ ಭಾಗದ ರೋಗಿಗಳು ತಮ್ಮ ಹರಳುಗಳನ್ನು ಅಗೆಸಲು ಎಲ್ಲಿ ಹೋಗುತ್ತಿದ್ದರು, ಅದನ್ನು ತಿಳಿದು ಕೊಂಡು ಆ ಭಾಗದ ಆಸ್ಪತ್ರೆಗಳಿಗೆ ಓಲೆ ಬರೆದುದಾಯಿತು.  ಉತ್ತರಗಳು ಬಂದವು. ಅಲ್ಲದೆ ಆಯಾ ಆಸ್ಪತ್ರೆಗಳು ಕೂಡಿಟ್ಟ ಹರಳುಗಳನ್ನೆಲ್ಲ ವರ್ಗೀಕರಣ ಮಾಡಿ ಪ್ರದರ್ಶಿಸಲಾಯಿತು. ಒಟ್ಟು ಅಂದಾಜು 3000 ಕ್ಕಿಂತಾ ಜಾಸ್ತಿ ಹರಳು ಸಂಗ್ರಹಿಸಲ್ಪಟ್ಟವು. ಅವುಗಳನ್ನು ಚೆನ್ನಾಗಿ ಪ್ರಭಾವ ಬೀರುವಂತೆ ಪ್ರದರ್ಶಿಸಲಾಯಿತು. ಹರಳುಗಳನ್ನು ಚಿಕ್ಕದಾಗಿ ಕತ್ತರಿಸಿ ಅದರ ರಾಸಾಯನಿಕಗಳನ್ನು ಗುರುತು ಹಚ್ಚಲಾಯಿತು.

	ಈ ಪ್ರದರ್ಶನಕ್ಕೆ ಹರಳು ಮ್ಯೂಸಿಯಮ್ ಎಂದು ಹೆಸರಿಡಲಾಯಿತು. ಇಂಥ ಮ್ಯೂಸಿಯಂ ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲ. ಅಂಥ ಮ್ಯೂಸಿಯಮ್ ಕಟ್ಟುವ ಹೆಮ್ಮೆ ವಿಜಾಪುರದ ಬಿ.ಎಲ್.ಡಿ. ಮೆಡಿಕಲ್ ಕಾಲೇಜಿಗೆ ಮಾತ್ರ ಇದೆ, ಆದ್ದರಿಂದ ಜಗತ್ತಿನಲ್ಲಿಯೇ ಇದು ಅತಿ ದೊಡ್ಡ ಹರಳು ಮ್ಯೂಸಿಯಂ.

	ಹರಳುಗಳು ಹುಟ್ಟಿದ ಅಂಗಾಂಗಗಳ ಯಾದಿಯನ್ನು ಕೆಳಗಿನಂತೆ ಮಾಡಬಹುದು.
ಯಾದಿ:	1) ಮಿದುಳಿನಲ್ಲಿ ಹುಟ್ಟಿದ ಹರಳು			11) ಮೂತ್ರಪಿಂಡದ ಹರಳು 
	2) ತಲೆಯ ತ್ವಚೆಯಲ್ಲಿ ಹುಟ್ಟಿದ ಹರಳು		        12) ಮೂತ್ರನಾಳದ ಹರಳು
	3) ಕಣ್ಣಿನಲ್ಲಿ ಹುಟ್ಟಿದ ಹರಳು			13) ಮೂತ್ರಕೋಶದ ಹರಳು
	4) ಮೂಗಿನಲ್ಲಿ ಹುಟ್ಟಿದ ಹರಳು			14) ಮೂತ್ರ ಮಾರ್ಗದ ಹರಳು 
	5) ಕಿವಿಯಲ್ಲಿಯ ಹರಳು				15) ರಕ್ತದ ವಾಹಿನಿಗಳಲ್ಲಿನ ಹರಳು
	6) ಲಾಲಾರಸದಲ್ಲಿಯ ಹರಳು			16) ಪಿತ್ತದ ಹರಳುಗಳು
	7) ಪುಪ್ಪುಸದಲ್ಲಿ ತಯಾರಾದ ಹರಳು			17) ಹಿಮ್ಮಡಿಯಲ್ಲಿ ಹರಳು
	8) ಹೃದಯದಲ್ಲಿ ಹರಳು				18) ನಿತಂಬಗಳ ಹರಳು
	9) ಕರುಳಿನಲ್ಲಿ ಹರಳು				19) ಗರ್ಭಕೋಶದಲ್ಲಿ ಹರಳು ಇತ್ಯಾದಿ
	10) ಪ್ಯಾಂಕ್ರಿಯಸ್ ಗ್ರಂಥಿಯಲ್ಲಿಯ ಹರಳು
				(ಡಾ. ಎಸ್.ಜೆ. ನಾಗಲೋಟಿಮಠ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ